SSLC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಗಮನಿಸಬೇಕಾದ ಕೆಲವು ಸಂಗತಿಗಳು
- ಪರೀಕ್ಷೆ ಆರಂಭವಾಗುವ ಅರ್ಧ ಗಂಟೆ ಮೊದಲೇ ಪರೀಕ್ಷಾಹಾಲ್ ನ ಬಳಿ ಇರಿ.ಎಲ್ಲಾ ದಿನವೂ ಮಧ್ಯಾಹ್ನ 1.30 ಕ್ಕೆ ಪರೀಕ್ಷೆ ಆರಂಭವಾಗುವುದು.
- 1.30 ಕ್ಕೆ Ans.Sheet ಸಿಕ್ಕಿದಾಗ ಮೊದಲ ಪುಟದಲ್ಲಿ ನಿಮ್ಮ ರಿಜಿಸ್ಟರ್ ನಂಬರನ್ನು ಅದಕ್ಕಿರುವ ಜಾಗದಲ್ಲಿ ತಪ್ಪಿಲ್ಲದೆ ಬರೆಯಬೇಕು,ಅಲ್ಲದೆ ಸಮಯ,ಸಬ್ಜೆಕ್ಟ್ , ತಾರೀಕು ಇತ್ಯಾದಿ ವಿಷಯಗಳನ್ನು ಪರೀಕ್ಷಾಮೇಲ್ವಿಚಾರಕರು ಹೇಳಿದಂತೆ ಬರೆಯಬೇಕು. 1.45 ಕ್ಕೆ ಪ್ರಶ್ನೆಪೇಪರ್ ಸಿಕ್ಕಿದಾಗ ಒಂದು ಮತ್ತು ಮೂರನೇ ಪುಟದಲ್ಲಿ ಮೇಲ್ಭಾಗದಲ್ಲಿ ರಿಜಿಸ್ಟರ್ ನಂಬರನ್ನು ಬರೆಯಬೇಕು.
- ಕೂಲ್ ಆಫ್ ಟೈಮ್ ನಲ್ಲಿ ಪ್ರಶ್ನೆಪೇಪರನ್ನು ಶ್ರದ್ಧೆಯಿಟ್ಟು ಓದಬೇಕು.
- ಸರಿಯಾಗಿ 2 ಗಂಟೆಗೆ ಉತ್ತರ ಬರೆಯಲು ಆರಂಭಿಸಬೇಕು.
- ಪ್ರತಿ ಅರ್ಧ ಗಂಟೆಗೊಮ್ಮೆ ಬೆಲ್ ಕೊಡಲಾಗುತ್ತದೆ.
- ಉತ್ತರ ಬರೆಯುವಾಗ ಸರಿಯಾದ ಪ್ರಶ್ನಾನಂಬರನ್ನು ನಮೂದಿಸಬೇಕು.
- ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆಯಲು ಪ್ರಯತ್ನಿಸಬೇಕು.
- ಪ್ರತೀ ದಿನ ಇನ್ ಸ್ಟ್ರುಮೆಂಟ್ ಬೋಕ್ಸ್ ತರಬೇಕು. ಅದರಲ್ಲಿ 2 ಪೆನ್, ಪೆನ್ಸಿಲ್, ರಬ್ಬರ್,ಸ್ಕೇಲ್ ಇತ್ಯಾದಿ.ಇರುವಂತೆ ನೋಡಿಕೊಳ್ಳಿ.
- ಪ್ರತೀ ದಿನ ಹಾಲ್ ಟಿಕೆಟ್ ತರಬೇಕು.ಆದ್ದರಿಂದ ಅದನ್ನು ಇನ್ ಸ್ಟ್ರುಮೆಂಟ್ ಬೋಕ್ಸ್ ನಲ್ಲಿರಿಸಿ.
- Ans.Sheet ನ ಪ್ರತೀ ಪುಟದಲ್ಲಿ ಪುಟನಂಬರ್ ಹಾಕಿ. Additional sheet ನ್ನು ತೆಗೆದುಕೊಂಡಾಗ ಶೀಟ್ ನಂಬರ್ ಹಾಗು ರಿಜಿಸ್ಟರ್ ನಂಬರನ್ನು ಬರೆಯಲು ಮರೆಯಬೇಡಿ.
- ಗಂ. 3.25/4.25 ಕ್ಕೆ ವಾರ್ನಿಂಗ್ ಬೆಲ್ ಕೊಡಲಾಗುವುದು.ಆಗ ಉತ್ತರ ಪತ್ರಿಕೆಯನ್ನು ಕಟ್ಟಿ ಮತ್ತೊಮ್ಮೆ ಎಲ್ಲಾ ಉತ್ತರಗಳನ್ನು ಪರಿಶೀಲಿಸಿಕೊಳ್ಳಿ ಮತ್ತು Ans.Sheet ನಲ್ಲಿ Additional sheet ನ ಟೋಟಲ್ ಸಂಖ್ಯೆಯನ್ನು ಅದಕ್ಕಾಗಿ ಇರುವ ಜಾಗದಲ್ಲಿ ನಮೂದಿಸಿ.
- ಕೊನೆಯಬೆಲ್ ಆದಾಗ ಉತ್ತರ ಪತ್ರಿಕೆಯನ್ನು ಅಧ್ಯಾಪಕರಿಗೆ ಕೊಡಬೇಕು.
No comments:
Post a Comment